ಕನ್ನಡ ಸೀಮೆಯ ಶಿಲ್ಪಕಲಾ ಸೋಜಿಗವನ್ನು ಸಾರುವ ಉದ್ದೇಶದಿಂದ ವಿನ್ಯಾಸಪಡಿಸಲಾಗಿರುವ ಈ ಅಂಗಿ ವೀರನೊಬ್ಬ ಕೈಯಲ್ಲಿ ಕತ್ತಿ ಮತ್ತು ಗುರಾಣಿ ಹಿಡಿದಿರುವ ಶಿಲ್ಪವನ್ನು ಒಳಗೊಂಡಿದೆ. ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಯ ಕೇದಾರೇಶ್ವರ ಗುಡಿಯಲ್ಲಿರುವ ವೀರಗಲ್ಲಿನಲ್ಲಿ ಇರುವ ಸೇವುಣರ ವೀರನೊಬ್ಬನ ಶಿಲ್ಪವನ್ನು ಮೂಲವಾಗಿರಿಸಿಕೊಂಡು ಮಾಡಿರುವ ಈ ಚಿತ್ರದಲ್ಲಿ ವೀರನಿಗೆ ಪ್ರಭಾವಳಿಯನ್ನು ನೀಡಿ ಹೆಚ್ಚು ಆಕರ್ಷಕವಾಗಿಸಲಾಗಿದೆ. ಇದರ ಕೆಳಗೆ ‘ಕನ್ನಡಿಗರನ್ನು ಕೆಣಕಿ ಉಳಿದವರಿಲ್ಲ’ ಎಂಬ ಸಾಲುಗಳನ್ನು ಬಳಸಿಕೊಳ್ಳಲಾಗಿದ್ದು, ಸಾಲು ಸಾಲು ಸಾಮ್ರಾಜ್ಯಗಳನ್ನು ಕಟ್ಟಾಳಿದ ಕನ್ನಡಿಗರ ಪರಾಕ್ರಮದ ಬಗ್ಗೆ ಸೂಚ್ಯವಾಗಿ ತಿಳಿಸಲಾಗಿದೆ.ಕೆಲವು ಅಧ್ಯಯನಗಳ ಪ್ರಕಾರ ಇಡೀ ಭಾರತದಲ್ಲಿ, ಕರ್ನಾಟಕದಲ್ಲಿ ದೊರಕಿದಷ್ಟು ವೀರಗಲ್ಲುಗಳು ಇನ್ನೆಲ್ಲೂ ದೊರಕಿಲ್ಲ ಎನ್ನಲಾಗುತ್ತದೆ. ಇದು ಕರ್ನಾಟಕ ವೀರರಿಂದಲೇ ತುಂಬಿದ್ದ ನಾಡಾಗಿತ್ತು ಎನ್ನುವುದನ್ನು ಸಾರಿ ಹೇಳುತ್ತದೆ. ಆ ಕನ್ನಡದ ವೀರರಿಗೆ ಗೌರವ ಸೂಚಿಸುವ ಸಲುವಾಗಿ ಈ ವಿನ್ಯಾಸ ಸಿದ್ಧಪಡಿಸಲಾಗಿದೆ. ಇನ್ನು ಅಂಗಿಯ ಹಿಂಭಾಗದಲ್ಲಿ ಚಿಕ್ಕದಾದ ಮಂಡಲದ ರೀತಿಯ ಚಿತ್ರ ರಚನೆ ಇದ್ದು ಇಂತಹ ರಚನೆಗಳನ್ನು ನಾವು ಅನೇಕ ಗುಡಿಗಳ ಮೇಲ್ಛಾವಣಿಗಳಲ್ಲಿ ಕಾಣಬಹುದು.
ಈ ಟೀಶರ್ಟ್ ನ ಹಿಂದಿನ ಭಾಗದಲ್ಲಿ ಕನ್ನಡದ ದಿಕ್ಕುಗಳಾದ ಮೂಡಣ ಪಡುವಣ ತೆಂಕಣ ಬಡಗಣಗಳನ್ನ ಹೊಯ್ಸಳರ ಗುಡಿಯ ಸೀಲಿಂಗ್ ನಲ್ಲಿ ಕೆತ್ತುವ ಭುವನೇಶ್ವರಿಯನ್ನ ಬಳಸಿ ತೋರಲಾಗಿದ್ದು ಕನ್ನಡಿಗರು ಮರೆತು ಹೋದ ದಿಕ್ಕುಗಳನ್ನ ಮತ್ತೆ ನೆನಪಿಸುವ ಕೆಲಸ ಮಾಡಲಾಗಿದೆ.
Reviews
There are no reviews yet.