"ಕರ್ಣಾಟಬಲ" ಸಂಘವು ಕನ್ನಡ ನುಡಿಯ, ಕನ್ನಡ ನಾಡಿನ ಹಾಗೂ ಕನ್ನಡಿಗರ ಹೆಮ್ಮೆಯನ್ನು ಜಗತ್ತಿಗೆ ಸಾರುವ ಹೊತ್ತಿನಲ್ಲಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪರಿಪಾಲನೆಗೆ ಸಮರ್ಪಿತವಾಗಿದೆ. ನಾವು ಸಮಾಜದಲ್ಲಿ ಶ್ರೇಷ್ಠ ಸೇವೆಯನ್ನು ನೀಡಲು, ಉತ್ತಮವಾದ ಅನುಭವವನ್ನು ಹಂಚಿಕೊಳ್ಳಲು ಮತ್ತು ನಮ್ಮ ಉದ್ದೇಶಗಳನ್ನು ಸಾಧಿಸಲು ಬದ್ಧರಾಗಿದ್ದೇವೆ. ನಮ್ಮ ಸಂಘವು ಕನ್ನಡಿಗರ ಹಿತಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.
ಕನ್ನಡಿಗರ ಇತಿಹಾಸ, ಘನ ಹಿನ್ನೆಲೆಯ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಸಂಶೋಧನೆ ಮಾಡುತ್ತಾ ಸಾಗಿದವರಿಗೆ ಮೈ ನವಿರೇಳಿಸುವುದು ಇದೇ ‘ಕರ್ಣಾಟಬಲ’ ಎನ್ನುವ ಪದ. ಅಂದಹಾಗೆ ‘ಕರ್ಣಾಟಬಲ‘ ಎಂಬುದು ಚಾಲುಕ್ಯರು ತಮ್ಮ ಸೇನೆಗೆ ಇಟ್ಟಿದ್ದ ಹೆಸರು. ಇದೇ ಕರ್ಣಾಟಬಲ ಸೇನೆಯ ಮುಖಾಂತರ ಚಾಲುಕ್ಯರು ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ವಿಂದ್ಯ ಪರ್ವತಗಳನ್ನು ದಾಟಿ ಆಗಿನ ರಾಜಕೀಯ ಕೇಂದ್ರ ಮಧ್ಯಪ್ರದೇಶದ ಕನೌಜ್ ಗೂ ತಮ್ಮ ಆಡಳಿತ ವಿಸ್ತರಿಸಿದ್ದರು. ಕರ್ಣಾಟ ಬಲ ಸೇನೆಯು ಕರ್ನಾಟಕದ ಇತಿಹಾಸದಲ್ಲಷ್ಟೇ ಅಲ್ಲ, ಭರತ ಖಂಡದ ಇತಿಹಾಸದಲ್ಲೇ ಪ್ರಾಮುಖ್ಯತೆ ಪಡೆದ ಅಧ್ಯಾಯ.