ಕನ್ನಡ ನಾಡು ನುಡಿಯ ವಿಚಾರದಲ್ಲಿ ಸದಾ ಸಂವೇದನಾಶೀಲರಾಗಿದ್ದ ಕೆಲವೇ ಕೆಲವು ಸಾಹಿತಿಗಳ ಪೈಕಿ ರಸಋಷಿ ಕುವೆಂಪು ಅಗ್ರಗಣ್ಯರು. ಕವಿಯ ಕೆಲಸ ಬರಿಯ ಕಥೆ, ಕಾವ್ಯಗಳನ್ನು ರಚಿಸುವುದಲ್ಲ ಅವುಗಳನ್ನೂ ಮೀರಿದ ಸಾಮಾಜಿಕ-ಸಾಹಿತ್ಯಿಕ ಜವಾಬ್ದಾರಿಯೊಂದು ಕವಿ ಎನಿಸಿಕೊಂಡವನ ಮೇಲೆ ಇರುತ್ತದೆ ಎನ್ನುವುದು ಕುವೆಂಪು ಅವರ ಬಲವಾದ ನಂಬಿಗೆಯಾಗಿತ್ತು. ಆ ಕಾರಣದಿಂದಲೇ ಕನ್ನಡ ನಾಡು-ನುಡಿಯ ವಿಚಾರ ಬಂದಾಗ ಕುವೆಂಪು ಸಿಡಿಲ ಕಿಡಿಗಳಂತಹ ಕನ್ನಡ ಪರ ಹೇಳಿಕೆಗಳನ್ನು ಕೊಡುತ್ತಿದ್ದರು. ಓದುಗರಲ್ಲಿ ರಸಾನುಭೂತಿಯನ್ನು ಉಂಟು ಮಾಡುವ ಕಾವ್ಯಗಳನ್ನು ರಚಿಸುವುದರಲ್ಲಷ್ಟೇ ಅಲ್ಲದೆ, ಅದಕ್ಕೂ ಮೀರಿದ – ಜನಗಳೊಳಗೆ ಇರುವ ನಾಡು ನುಡಿಯ ಗೊಂದಲಗಳಿಗೆ ಉತ್ತರವೀಯುವ ಅನೇಕ ಪ್ರಯತ್ನಗಳಿಗೆ ಅವರು ಕೈ ಹಾಕಿದ್ದರು. ಕರ್ನಾಟಕ ಏಕೀಕರಣಕ್ಕೂ ಮುಂಚೆ, ಏಕೀಕರಣದ ಕಾವು ಏರಿದ್ದ ಕಾಲದಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಷಣ ಮಾಡುವಾಗ ಏಕೀಕರಣದ ಪರವಾಗಿ ಕುವೆಂಪು ಮಾತನಾಡಿದ್ದರು. ಇದು ಆಗಿನ ಸಚಿವರೊಬ್ಬರಿಗೆ ಹಿಡಿಸಲಿಲ್ಲ, ಅದೇ ಕಾರಣದಿಂದ ಕೆಲವೇ ದಿನಗಳಲ್ಲಿ ಕುವೆಂಪು ಅವರಿಗೆ ಎಚ್ಚರಿಕೆಯ ನೋಟಿಸ್ ಬಂದಿತ್ತಂತೆ. ಅದಕ್ಕೆ ಪ್ರತ್ಯುತ್ತರವಾಗಿ ಅವರು ಬರೆದ ಕವನವೇ ‘ಅಖಂಡ ಕರ್ನಾಟಕ’. ಕರ್ಣಾಟಕ ಎಂಬುದೇನು ಹೆಸರೆ ಬರಿಯ ಮಣ್ಣಿಗೆ? ಮಂತ್ರ ಕಣಾ! ಶಕ್ತಿ ಕಣಾ! ಎಂಬ ಸಾಲನ್ನು ಅದೇ ಪದ್ಯದಿಂದ ತೆಗೆದುಕೊಂಡು ಕುವೆಂಪು ಅವರ ನೆನಪನ್ನು ಅದರೊಳಗೆ ಬೆರೆಸಿ ಈ ವಿನ್ಯಾಸವನ್ನು ಸಿದ್ಧಪಡಿಸಲಾಗಿದೆ. ಈ ಪದ್ಯ ಈಗ ‘ಇಕ್ಷು ಗಂಗೋತ್ರಿ’ ಎಂಬ ಕವನ ಸಂಕಲನದಲ್ಲಿ ಪ್ರಕಟವಾಗಿದೆ. ಕನ್ನಡ ನಾಡು-ನುಡಿ ಪರ ಒಲವುಳ್ಳ ಜನ ಸಾಮಾನ್ಯರಿಗೂ ಈ ಪದ್ಯ ಮತ್ತು ರಸಋಷಿ ಸ್ಪೂರ್ತಿಯಾಗಬಲ್ಲರು.
-10%
ಕುವೆಂಪು – ಟಿ-ಶರ್ಟ್
₹499.00 Original price was: ₹499.00.₹449.00Current price is: ₹449.00.
SKU: Kuvempu_T-Shirt
Category: ಟಿ-ಶರ್ಟ್ಗಳು
Color | Black, White |
---|---|
Size | S, M, L, XL, XXL, XXXL |
Only logged in customers who have purchased this product may leave a review.
ಸಂಬಂಧಿತ ಉತ್ಪನ್ನಗಳು
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackRed
ಅತ್ಯುಗ್ರರ್ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlackNavy Blue
ಯಾಳಿ ಸಿಂಹ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿWhite
ಪುನೀತ್ ರಾಜಕುಮಾರ್ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
ಅಂಬರೀಶ ಕನ್ವರ್ ಲಾಲ್ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿBlack
ರಾಜಕುಮಾರ ನಾ ನಿನ್ನ ಮರೆಯಲಾರೆ – ಟಿ – ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ
- Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿNavy Blue
“ಗ” ಬೆಳವಣಿಗೆ – ಟಿ-ಶರ್ಟ್
₹499.00Original price was: ₹499.00.₹449.00Current price is: ₹449.00. - Select options This product has multiple variants. The options may be chosen on the product page Quick Viewಇಚ್ಛೆಪಟ್ಟಿಗೆ ಸೇರಿಸಿ

ಕುವೆಂಪು – ಟಿ-ಶರ್ಟ್
Select options
This product has multiple variants. The options may be chosen on the product page
ಮುಚ್ಚಿ
Reviews
There are no reviews yet.