ಬಹುಶಃ ನಿಮ್ಮಲ್ಲಿ ಹಲವಾರು ಜನ ಈ ಹೆಸರನ್ನು ಮೊದಲನೇ ಬಾರಿ ಕೇಳುತ್ತಿದ್ದೀರಿ. ಇತಿಹಾಸದ ಮೇಲೆ ಆಸಕ್ತಿಯಿದ್ದವರು ಅದರಲ್ಲೂ ವೀರ ಕನ್ನಡಿಗ ಮನೆತನಗಳಾದ ಚಾಲುಕ್ಯ, ರಾಷ್ಟ್ರಕೂಟರ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದವರಿಗೆ ಈ ಪದಗಳೇನೂ ಹೊಸದಾಗಿ ತೋರುವುದಿಲ್ಲ.

"ಕರ್ಣಾಟಬಲ" ಸಂಘವು ಕನ್ನಡ ನುಡಿಯ, ಕನ್ನಡ ನಾಡಿನ ಹಾಗೂ ಕನ್ನಡಿಗರ ಹೆಮ್ಮೆಯನ್ನು ಜಗತ್ತಿಗೆ ಸಾರುವ ಹೊತ್ತಿನಲ್ಲಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪರಿಪಾಲನೆಗೆ ಸಮರ್ಪಿತವಾಗಿದೆ. ನಾವು ಸಮಾಜದಲ್ಲಿ ಶ್ರೇಷ್ಠ ಸೇವೆಯನ್ನು ನೀಡಲು, ಉತ್ತಮವಾದ ಅನುಭವವನ್ನು ಹಂಚಿಕೊಳ್ಳಲು ಮತ್ತು ನಮ್ಮ ಉದ್ದೇಶಗಳನ್ನು ಸಾಧಿಸಲು ಬದ್ಧರಾಗಿದ್ದೇವೆ. ನಮ್ಮ ಸಂಘವು ಕನ್ನಡಿಗರ ಹಿತಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.
ಬಹುಶಃ ನಿಮ್ಮಲ್ಲಿ ಹಲವಾರು ಜನ ಈ ಹೆಸರನ್ನು ಮೊದಲನೇ ಬಾರಿ ಕೇಳುತ್ತಿದ್ದೀರಿ. ಇತಿಹಾಸದ ಮೇಲೆ ಆಸಕ್ತಿಯಿದ್ದವರು ಅದರಲ್ಲೂ ವೀರ ಕನ್ನಡಿಗ ಮನೆತನಗಳಾದ ಚಾಲುಕ್ಯ, ರಾಷ್ಟ್ರಕೂಟರ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದವರಿಗೆ ಈ ಪದಗಳೇನೂ ಹೊಸದಾಗಿ ತೋರುವುದಿಲ್ಲ.
ಕನ್ನಡಿಗರ ಇತಿಹಾಸ, ಘನ ಹಿನ್ನೆಲೆಯ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಸಂಶೋಧನೆ ಮಾಡುತ್ತಾ ಸಾಗಿದವರಿಗೆ ಮೈ ನವಿರೇಳಿಸುವುದು ಇದೇ ‘ಕರ್ಣಾಟಬಲ’ ಎನ್ನುವ ಪದ. ಅಂದಹಾಗೆ ‘ಕರ್ಣಾಟಬಲ‘ ಎಂಬುದು ಚಾಲುಕ್ಯರು ತಮ್ಮ ಸೇನೆಗೆ ಇಟ್ಟಿದ್ದ ಹೆಸರು. ಇದೇ ಕರ್ಣಾಟಬಲ ಸೇನೆಯ ಮುಖಾಂತರ ಚಾಲುಕ್ಯರು ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ವಿಂದ್ಯ ಪರ್ವತಗಳನ್ನು ದಾಟಿ ಆಗಿನ ರಾಜಕೀಯ ಕೇಂದ್ರ ಮಧ್ಯಪ್ರದೇಶದ ಕನೌಜ್ ಗೂ ತಮ್ಮ ಆಡಳಿತ ವಿಸ್ತರಿಸಿದ್ದರು. ಕರ್ಣಾಟ ಬಲ ಸೇನೆಯು ಕರ್ನಾಟಕದ ಇತಿಹಾಸದಲ್ಲಷ್ಟೇ ಅಲ್ಲ, ಭರತ ಖಂಡದ ಇತಿಹಾಸದಲ್ಲೇ ಪ್ರಾಮುಖ್ಯತೆ ಪಡೆದ ಅಧ್ಯಾಯ. ಕಾರಣ, ಉತ್ತರ ಭಾರತದ ಹೆಚ್ಚಿನ ಎಲ್ಲ ಭೂಪ್ರದೇಶಗಳನ್ನೂ ಕೈವಶ ಮಾಡಿಕೊಂಡು ದಕ್ಷಿಣದ ಕಡೆಗೆ ತನ್ನ ಸೇನೆಯೊಂದಿಗೆ ಮುನ್ನುಗ್ಗುತ್ತಿದ್ದ ಹರ್ಷವರ್ಧನನನ್ನು ಸೋಲಿಸಿದ್ದು ಇದೇ ಚಾಲುಕ್ಯರ ಕರ್ಣಾಟಬಲ ಸೇನೆ. ತದನಂತರ ಚಾಲುಕ್ಯರು ಇಡೀ ಭಾರತದ ಮೇಲೆ ಅಧಿಪತ್ಯ ಸ್ಥಾಪಿಸಿಕೊಂಡು ಕನ್ನಡಿಗರ ಕೆಚ್ಚು, ಕನ್ನಡಿಗರ ಶೌರ್ಯವನ್ನು ಇಡೀ ಭರತ ಭೂಮಿಗೆ ಪರಿಚಯಿಸಿದರು ಹಾಗು ಚಾಲುಕ್ಯರ ಇಮ್ಮಡಿ ಪುಲಿಕೇಶಿಯು ‘ದಕ್ಷಿಣಾಪಥೇಶ್ವರ’ ಎಂದು ಬಿರುದಾಂಕಿತನಾದನು.